Saturday, January 27, 2018

शास्त्रकोषः

छिनत्ति कफसङ्घातं छिनत्ति च मरुद्गणम् ।
भुक्तं च जीरयत्यन्नं पीतमुष्णोदकं निशि ॥( नाडीविज्ञानम् – 132 -133)

ರಾತ್ರಿಯಲ್ಲಿ ಬಿಸಿನೀರನ್ನು ಕುಡಿಯುವುದರಿಂದ ಅದು ವಾತ ಹಾಗೂ ಕಫವನ್ನು ನಾಶಗೊಳಿಸುತ್ತದೆ ಹಾಗೂ ತಿಂದ ಆಹಾರವನ್ನು ಜೀರ್ಣಗೊಳಿಸಿತ್ತದೆ.


Drinking warm water at night destroys the Kapha and helps to digest the food well.

Friday, January 26, 2018

शास्त्रकोषः

भुक्ताहारो द्वितीयेऽह्नि रसत्वमुपगच्छति ।
शोणितं तु तृतीयेऽह्नि चतुर्थे मांसनामपि ॥( नाडीविज्ञानम् –124)
मेदस्त्वं पञ्चमे षष्ठे अस्थित्वं सप्तमे व्रजेत् ।
मज्जतां शुक्लतां याति चाष्टमे नृणाम् ॥( नाडीविज्ञानम् – 125)

ನಾವು ಸೇವಿಸಿದ ಆಹಾರವು ಎರಡನೆಯ ದಿನ ರಸವಾಗುತ್ತದೆ, ಮೂರನೆಯ ದಿನ ರಕ್ತವಾಗುತ್ತದೆ, ನಾಲ್ಕನೆಯ ದಿನ ಮಾಂಸವಾಗುತ್ತದೆ, ಐದನೆಯ ದಿನ ಮೇಧಸ್ಸಾಗಿ ಪರಿಣಮಿಸುತ್ತದೆ. ಆರನೆಯ ದಿನ ಅಸ್ಥಿರೂಪವಾಗುತ್ತದೆ. ಏಳನೆಯ ದಿನ ಮಜ್ಜಾರೂಪವನ್ನು ಪಡೆಯುತ್ತದೆ. ಎಂಟನೆಯ ದಿನ ಶುಕ್ಲರೂಪವನ್ನು ಪಡೆಯುತ್ತದೆ.


Food consumed by us becomes gravy in the next day, blood in the third day, meat in the fourth, Medhas in the sixth, osteogenetic in seventh and its gets white colored in the eighth day.  

Thursday, January 25, 2018

शास्त्रकोषः

आदौ मधुरमश्नीयात् मध्येऽम्ललवणो रसः ।
अन्ते तिक्तकषायौ च सम्यक्जीर्णम् सुखावहम् ॥( नाडीविज्ञानम् – 128)

ಆಹಾರ ಸೇವನೆಯ ಕ್ರಮಮೊದಲು ಸಿಹಿಯಾದ ಪದಾರ್ಥವನ್ನು ಮಧ್ಯದಲ್ಲಿ ಆಮ್ಲ ಹಾಗೂ ಲವಣರಸವುಳ್ಳ ಪದಾರ್ಥವನ್ನು ಕೊನೆಯಲ್ಲಿ ತಿಕ್ತ ಹಾಗೂ ಕಷಾಯರಸವುಳ್ಳ ಪದಾರ್ಥವನ್ನು ಸೇವಿಸಿದರೆ ಚೆನ್ನಾಗಿ ಜೀರ್ಣವಾಗುವುದು.


Methods for consuming food – sweet products in the beginning, acidic and salty products in the middle and pungent type of food at the end, by consuming in this way the food gets digested well.         

Wednesday, January 24, 2018

शास्त्रकोषः

कृमिभिर्भक्ष्यते पादं पादश्चेन्धनतां व्रजेत् ।
पादः किट्टत्वमायाति पादश्चाङ्गे विसर्पति ॥ ( नाडीविज्ञानम् – 126)

ನಾವು ಸೇವಿಸಿದ ಆಹಾರದ ಕಾಲುಭಾಗವು ಕೃಮಿಗಳಿಂದ ತಿನ್ನಲ್ಪಡುತ್ತದೆ. ಕಾಲುಭಾಗವು ಇಂಧನವಾಗಿ ಪರಿಣಮಿಸುತ್ತದೆ. ಕಾಲುಭಾಗವು ಮಲವಾಗುವುದು. ಉಳಿದ ಕಾಲುಭಾಗವು ದೇಹವನ್ನೆಲ್ಲಾ ವ್ಯಾಪಿಸಿಕೊಳ್ಳುವುದು.


Quarter of the food consumed by us gets eaten by bacteria. Quarter part of it becomes fuel. Other quarter becomes feces whereas the leftover pervades the body.     

Tuesday, January 23, 2018

शास्त्रकोषः

यथाणुरग्निस्तृणगोमयाद्यैः सन्धुक्ष्यमाणो भवति क्रमेण ।
महान् स्थिरः सर्वपचश्च सम्यक् दुग्धस्य पेयादिभिरन्तरग्निः ॥( नाडीविज्ञानम् – 116)

ಅಲ್ಪಪ್ರಮಾಣದ ಅಗ್ನಿಯಿಂದ ಹುಲ್ಲು, ಬೆರಣಿ ಮುಂತಾದುವು ಸಂಪೂರ್ಣವಾಗಿ ಸುಟ್ಟು ಹೋಗುವಂತೆ ಶರೀರದಲ್ಲಿರುವ ಅಲ್ಪಪ್ರಮಾಣದ ಅಗ್ನಿಯಿಂದ ನಾವು ತಿಂದ, ಕುಡಿದ ಎಲ್ಲಾ ಪದಾರ್ಥಗಳು ಪಚನಗೊಳ್ಳುತ್ತವೆ.  


As the things like grass, dung etc gets burned by even with the small amount of fire; food consumed by us gets digested with a small amount of fire.     

Monday, January 22, 2018

शास्त्रकोषः

नाभेरूर्ध्वे चाङ्गुले वामभागे तिष्ठत्यग्निः पावकस्य प्रसिद्धः ।
अग्निः पित्तं पित्तमग्निस्वरूपं तस्मात् पित्तं प्राणिनां प्राणमाहुः ॥ ( नाडीविज्ञानम् – 114)

ಮಾನವನ ಶರೀರದಲ್ಲಿ ನಾಭಿಯ ಊರ್ಧ್ವಭಾಗದಲ್ಲಿ ಎರಡು ಅಂಗುಲಗಳಷ್ಟು ಎಡಭಾಗದಲ್ಲಿ ಅಗ್ನಿಯು ಇರುತ್ತದೆ. ಅಗ್ನಿಯು ಪಿತ್ತಸ್ವರೂಪ, ಪಿತ್ತವು ಅಗ್ನಿಸ್ವರೂಪ. ಆದ್ದರಿಂದ ಪಿತ್ತವನ್ನು ಪ್ರಾಣಿಗಳ ಪ್ರಾಣವೆಂದು ಹೇಳಲಾಗುತ್ತದೆ.


Fire is present in the human body two inches above the navel. That fire is nature of Pitta; Pitta is the nature of fire. Therefore Pitta is called as the Prana of fauna.       

Sunday, January 21, 2018

शास्त्रकोषः

समदोषः समाग्निश्च समधातुमलक्रियः ।
प्रसन्नात्मेन्द्रियमनाः स्वस्थ इत्यभिधीयते ॥ ( नाडीविज्ञानम् –  38)

ಶರೀರದಲ್ಲಿ ವಾತ, ಪಿತ್ತ, ಕಫ ದೋಷಗಳು ಸಮಪ್ರಮಾಣದಲ್ಲಿರುವುದು, ಜಠರಾಗ್ನಿಯು ಸಮಪ್ರಮಾಣದಲ್ಲಿರುವುದು, ಸಪ್ತಧಾತುಗಳು ಯೋಗ್ಯಪ್ರಮಾಣದಲ್ಲಿರುವುದು, ಮಲಕ್ರಿಯೆಯು ಯೋಗ್ಯಪ್ರಮಾಣದಲ್ಲಿರುವುದು, ಇಂದ್ರಿಯಮನಸ್ಸುಗಳ ಪ್ರಸನ್ನತೆಇವಿಷ್ಟು ಮಾನವನ ಸ್ವಸ್ಥತೆಯ ಲಕ್ಷಣಗಳಾಗಿವೆ.


The symptoms of a healthy human being are - Doshas called Vata, Pitta and Kapha being in the state of levelness, seven types of tissues existing in enough quantity, feces in the natural state and blissfulness of organs and mind.    

Saturday, January 20, 2018

शास्त्रकोषः

द्रवेऽतिकठिना नाडी कोमला कठिनाशने ।
द्रवद्रव्यस्य काठिन्ये कोमला कठिनापि च ॥( नाडीविज्ञानम् – 73)

ದ್ರವಪದಾರ್ಥಗಳ ಸೇವನೆಯಿಂದ ನಾಡಿಯು ಕಠಿಣವಾಗುವುದು. ಘನಪದಾರ್ಥಗಳ ಸೇವನೆಯಿಂದ ನಾಡಿಯು ಮೃದುವಾಗುವುದು. ದ್ರವಪದಾರ್ಥವನ್ನು ಘನೀಕರಿಸಿದ ಬಳಿಕ ಸೇವಿಸುವುದರಿಂದ ನಾಡಿಯು ಕೆಲವೊಮ್ಮೆ ಮೃದುವಾಗುವುಗುದು ಕೆಲವು ಬಾರಿ ಕಠಿಣವಾಗುವುದು.


The vein present in the human body becomes hard by consuming fluid. It becomes soft by consuming solid products. If the fluid is consumed after consolidation then the vein becomes soft sometimes and hard at certain times.   

Friday, January 19, 2018

शास्त्रकोषः

अङ्गुष्ठस्य तु मूले या सा नाडी जीवसाक्षिणी ।
तस्या गतिवशाद् विद्यात् सुखं दुःखञ्च रोगिणाम् ॥ ( नाडीविज्ञानम् – 14)

ಮಾನವನ ಕೈಯ ಹೆಬ್ಬೆರಳ ಬುಡದಲ್ಲಿ ಜೀವಸಾಕ್ಷಿಯಾದ ನಾಡಿಯಿರುವುದು. ಇದರ ಪರಿಶೀಲನೆಯಿಂದ ಜೀವಿಯ ಸುಖ, ದುಃಖ, ರೋಗ, ರೋಗದ ಸಂಭವಗಳನ್ನು ತಿಳಿಯಬಹುದಾಗಿದೆ.


We can know one’s happiness, misery, sickness and about the diseases which are likely to happen by inspecting the vein which is present beneath the thumb finger of human hand. 

Thursday, January 18, 2018

शास्त्रकोषः

तासाञ्च सूक्ष्मसुषिराणि शतानि सप्त स्युस्तानि यैरसकृदन्नरसं वहद्भिः ।
आप्याय्यते वपुरिदं हि नृणाममीषामम्भः स्रवद्भिरिव सिन्धुशतैः समुद्रः ॥(नाडीविज्ञानम् – २१)

ನಮ್ಮ ಶರೀರದಲ್ಲಿರುವ 72,000 ಸ್ಥೂಲನಾಡಿಗಳಲ್ಲಿ 700 ನಾಡಿಗಳು ಸೂಕ್ಷ್ಮಛಿದ್ರವನ್ನು ಹೊಂದಿವೆ. ನೂರಾರು ನದಿಗಳು ತಮ್ಮ ನೀರಿನಿಂದ ಸಮುದ್ರವನ್ನು ಪರಿಪೂರ್ಣಗೊಳಿಸುವಂತೆ  ಅನ್ನರಸವನ್ನು ಹೊತ್ತಿರುವ ನಾಡಿಗಳು ಮಾನವನ ಸಂಪೂರ್ಣ ಶರೀರವನ್ನು ಅನ್ನರಸದಿಂದ ಪೂರ್ತಿಗೊಳಿಸುತ್ತವೆ.


In 72,000 macro veins there are 700 veins which have small holes. As hundreds of rivers fill the sea with water, these veins fill the human body with AnnaRasa.   

Wednesday, January 17, 2018

शास्त्रकोषः

द्वासप्ततिसहस्रं तु तासां स्थूलाः प्रकीर्तिताः ।
देहे धमन्यो धन्यास्ताः पञ्चेन्द्रियगुणावहाः ॥(नाडीविज्ञानम् – ४)

ಶರೀರದಲ್ಲಿರುವ ಮೂರುವರೆ ಕೋಟಿ ನಾಡಿಗಳಲ್ಲಿ ಎಪ್ಪತ್ತೆರಡುಸಾವಿರ ನಾಡಿಗಳು ಸ್ಥೂಲವಾಗಿದ್ದು ಐದು ಇಂದ್ರಿಯಗಳು ಬಾಹ್ಯವಸ್ತುವಿನಲ್ಲಿರುವ ರೂಪ, ರಸ, ಗಂಧ, ಸ್ಪರ್ಶ ಹಾಗೂ ಶಬ್ದಗಳೆಂಬ ಐದು ಗುಣಗಳನ್ನು ನಾಡಿಗಳ ಮೂಲಕ ಗ್ರಹಿಸುತ್ತವೆ.

There are 3.5 crore veins present in the human body where 72,000 of them are macro veins. Five sense organs grasp their subjects called color, taste, smell, touch and sound through these veins.