Sunday, December 31, 2017

शास्त्रकोषः

देशकालक्रियाद्रव्यकर्तॄणां शुद्धता यदि ।
मन्त्राणां च तदा पूर्णं कर्मणां फलमश्नुते ॥((देवीभागवतम्  4 स्कन्धः 4.45 - 46)

ವೇದೋಕ್ತಕರ್ಮಗಳ ಆಚರಣೆಗೆ ಉಪಯೋಗಿಸುವ ದೇಶ, ಕಾಲ, ಕ್ರಿಯೆ, ದ್ರವ್ಯ, ಮಂತ್ರಗಳು ಹಾಗೂ ಕರ್ತೃ ಇವೆಲ್ಲವೂ ಶುದ್ಧವಾಗಿದ್ದಾಗ ಮಾತ್ರ ಕರ್ಮವು ಸಂಪೂರ್ಣಫಲಪ್ರದವಾಗಿರುವುದು.

वेदोक्त कर्मों का आचरण करने के लिए उपयुक्त स्थान, काल, क्रिया, सामग्री, मंत्र और कर्ता यह सब परिशुद्ध होने पर ही कर्म संपूर्ण फल प्राप्त कराता है ।


The performed actions ensure the complete good result only when the place, time, commodities, spells and the doer of the deeds which are preached by Vedas are totally pure. 

Saturday, December 30, 2017

शास्त्रकोषः

द्रोहार्जितेन द्रव्येण यत्करोति शुभं नरः ।
विपरीतं भवेत्तत्तु फलकाले नृपोत्तम ॥(देवीभागवतम्  
4 स्कन्धः 4.42 - 43)

ಪರರಿಗೆ ದ್ರೋಹಬಗೆದು ಸಂಪಾದಿಸಿದ ಸಂಪತ್ತಿನಿಂದ ಶುಭಕಾರ್ಯವನ್ನು ಆಚರಿಸಿದರೂ, ಆ ಕಾರ್ಯವು ಫಲವನ್ನು ನೀಡುವ ಸಂದರ್ಭದಲ್ಲಿ ಅಶುಭವನ್ನೇ ಉಂಟುಮಾಡುವುದು.

दूसरों से द्रोह करके प्राप्त हुई संपत्ति से शुभकार्य कार्य करने पर भी वह कार्य फल देने के समय मे अशुभ परिणाम ही देता है ।


The wealth aquired from the betrayal towards the others gives bad results even though it is used for good deeds. 

Friday, December 29, 2017

शास्त्रकोषः

जनः पैतृकदोषेण दोषान्मातामहस्य च ।
गुरुदोषात् त्रिभिर्दोषैः हरिदोषो भवेद् ध्रुवम् ॥
कुलत्रयं यच्च शुद्धं कथं सोऽहंकृतो भवेत् ॥(देवीभागवतम्  9 स्कन्धः 41.7)

ಮಾನವನು ತನ್ನ ತಂದೆಯ ವಂಶದಲ್ಲಿರುವ ದೋಷದ ಕಾರಣದಿಂದ ಅಥವಾ ತನ್ನ ತಾಯಿಯ (ತಂದೆಯ) ವಂಶದಲ್ಲಿರುವ ದೋಷದ ಕಾರಣದಿಂದ ಅಥವಾ ತನ್ನ ಗುರುವಿನ ದೋಷದ ಕಾರಣದಿಂದಾಗಿ ಭಗವಂತನಲ್ಲಿ ದೋಷವನ್ನೆಸಗುವನು. ತಾಯಿ – ತಂದೆ – ಗುರು ಇವರು ಮೂವರೂ ಪರಿಶುದ್ಧರಾಗಿದ್ದರೆ ಮಾನವನು ದುರಹಂಕಾರಿಯಾಗಲಾರ.

मनुष्य अपने पिता के या अपने मातामह के वंश मे स्थित दोषों से अथवा अपने गुरु के दोषों से भगवान के विषय में दोष करता है । माँ -  पिता – गुरु यह तीनों की परिशुद्धता रहने पर वह भला अंहकारी कैसे हो सकता है ।


A man gets mistaken regarding the God due to the earlier mistakes of his ancestors and his Guru. How shall a man can be mistaken when his forefathers and the Guru has the purity.  

Thursday, December 28, 2017

शास्त्रकोषः

द्विसहस्रं योजनानां सगव्यूत्तुरं क्षणात् ।
पर्येति देवदेवेशो विश्वव्यापी निरन्तरम् ॥(देवीभागवतम्  8 स्कन्धः 15.43)

ಪ್ರತಿಯೊಂದು ಕ್ಷಣದಲ್ಲೂ ನಿರಂತರವಾಗಿ 2000 ಯೋಜನ ಹಾಗೂ 2 ಕ್ರೋಶಗಳಷ್ಟು ದಾರಿಯನ್ನು ಕ್ರಮಿಸುವನು ವಿಶ್ವವ್ಯಾಪಕವಾದ ಸೂರ್ಯನು. (1 ಯೋಜನ = 9 ಮೈಲಿ, 1 ಕ್ರೋಶ = 3 ಮೈಲಿ)

हर एक पल में लगातार दो हजार योजन और दो क्रोश परिमित मार्ग पार करनेवाला वह विश्वव्यापक सूर्य है ।


The almighty Sun travels 2000 Yojanas and 2 Kroshas every second continiously.(1 Yojana = 9 miles, 1 Krosha = 3 miles).  

Wednesday, December 27, 2017

शास्त्रकोषः

शीघ्रमन्दादिगतिभिः त्रिविधं गमनं रवेः ।(देवीभागवतम् 8 स्कन्धः 15.1)

ಸೂರ್ಯನ ಗತಿಯು ಶೀಘ್ರ, ಮಂದ, ಸಮ ಎಂಬುದಾಗಿ ಮೂರು ವಿಧವಾಗಿದೆ.

सूर्य की गतियाँ तीन प्रकार की हैं – शीघ्र, मंद और समान ।


The Sun has the three speeds called quick, slow and steady.

Tuesday, December 26, 2017

शास्त्रकोषः

विषुवत्संज्ञमासाद्य गतिसाम्यं वितन्वते ।
समस्थानमथासाद्य दिनसाम्यं करोति च ॥(देवीभागवतम्  8 स्कन्धः 16.26 - 26)

ವಿಷುವತ್ ಸ್ಥಾನದಲ್ಲಿ ಸೂರ್ಯನು ಸಮಾನಗತಿಯನ್ನು ಹೊಂದಿರುತ್ತಾನೆ. ಈ ಸಮಯದಲ್ಲಿ ದಿನವು ರಾತ್ರಿಯ ಸಮಪ್ರಮಾಣದಲ್ಲಿರುತ್ತದೆ.

विषुवत स्थान में सूर्य की समान गति रहती है । इस वक्त दिन निशाओं के समान रहते हैं ।


In the equinox the pace of the Sun is neutral. During this period the duration of the days is equal to the nights.

Monday, December 25, 2017

शास्त्रकोषः

दक्षिणायनमासाद्य गतिशैघ्र्यं वितन्वते ।
अवरोहस्थानमसौ गच्छन् ह्रस्वं दिनं चरेत् ॥(देवीभागवतम्  8 स्कन्धः 16.24 - 25)

ದಕ್ಷಿಣಾಯನದಲ್ಲಿ ಸೂರ್ಯನು ಶೀಘ್ರಗತಿಯನ್ನು ಹೊಂದಿರುತ್ತಾನೆ. ದಕ್ಷಿಣಾಯನಸ್ಥಾನದಲ್ಲಿ ಸೂರ್ಯನು ಇಳಿಯುತ್ತಿರುವ ಸಮಯದಲ್ಲಿ ದಿನಗಳು ಹ್ರಸ್ವವಾಗಿರುತ್ತವೆ.

दक्षिणायन में सूर्य की गति शीघ्र रहती है । दक्षिणायन स्थान में सूर्य उतरते वक्त दिन चौडे हो जाते हैं ।


In the winter solstice the Sun travels in a fast pace. When the Sun is switching towards the summer solstice the duration of the days becomes shorter. 

Sunday, December 24, 2017

शास्त्रकोषः

पुरः पश्चात् सहैवासावर्कस्य परिवर्तते ।
शीघ्रमन्दसमानाभिर्गतिभिर्विचरन् विभुः ॥ (देवीभागवतम्  8 स्कन्धः 16.26 - 27)

ಶುಕ್ರಗ್ರಹವು ಕೆಲವುಬಾರಿ ಸೂರ್ಯನೊಂದಿಗೆ ಸಾಗಿದರೆ, ಕೆಲವೊಮ್ಮೆ ಸೂರ್ಯನಿಗಿಂತ ಮುಂದೆ ಸಾಗುವುದು, ಕೆಲವೊಮ್ಮೆ ಹಿಂದೆ ಉಳಿಯುವುದು. ಶುಕ್ರಗ್ರಹಕ್ಕೂ ಶೀಘ್ರ, ಮಂದ, ಸಮ ಎಂಬ ಮೂರು ಗತಿಗಳಿವೆ.

शुक्रग्रह कभी कभी सूर्य के साथ चलता है, तो कभी पीछे रहता है या फिर आगे निकलता है । शुक्रग्रह की भी शीघ्र, मंद और समान यह गतियाँ हैं ।
  

Sometimes the Venus travels along with the Sun whereas sometimes it remains back or else goes ahead crossing the Sun. The Venus also has the three speeds called as quick, slow and steady.

Saturday, December 23, 2017

शास्त्रकोषः

ततः शुक्रो द्विलक्षेण योजनानामथोपरि । (देवीभागवतम्  8 स्कन्धः 16 .26)

ನಕ್ಷತ್ರಗಳಿಗಿಂತ 2 ಲಕ್ಷ ಯೋಜನ ಮೇಲೆ ಶುಕ್ರಗ್ರಹವಿದೆ.

नक्षत्रों से दो लाख योजन उपर शुक्रग्रह रहता है ।

The planet Venus lies on the distance of two lakh miles upwards from the stars.

Friday, December 22, 2017

शास्त्रकोषः

ततो भजक्रं भ्रमति योजनानां त्रिलक्षतः । (देवीभागवतम्  8 स्कन्धः 16 .24)

ಚಂದ್ರನ ಸ್ಥಾನದಿಂದ ಮೂರುಲಕ್ಷಯೋಜನ ಮೇಲೆ ನಕ್ಷತ್ರಮಂಡಲವಿದೆ.

चन्द्र के स्थान से तीन लाख योजन उपर नक्षत्रमण्डल रहता है ।


There lies the orb of stars, on the three lakh miles distance upwards the Moon.

Thursday, December 21, 2017

शास्त्रकोषः

उपलभ्यमानो मित्रस्य संवत्सुरभुजि च सः ।
पक्षाभ्यां चौषधीनाथो भुङ्क्ते मासभुजि च सः ।
सपादभाग्भ्यां दिवसभुक्तिं पक्षभुजि चरेत् । (देवीभागवतम्  8 स्कन्धः 16 .18 - 19)

ಸೂರ್ಯನ ಒಂದು ವರ್ಷದ ಮಾರ್ಗವನ್ನು ಚಂದ್ರನು ಎರಡು ಪಕ್ಷಗಳಲ್ಲಿ ದಾಟಿಹೋಗುವನು. ಹಾಗೆಯೇ ಸೂರ್ಯನ ಒಂದು ತಿಂಗಳ ಮಾರ್ಗವನ್ನು ಚಂದ್ರನು ಎರಡೂಕಾಲು ದಿನಗಳಲ್ಲಿ, ಸೂರ್ಯನ ಒಂದು ಪಕ್ಷದ ಮಾರ್ಗವನ್ನು ಚಂದ್ರನು ಒಂದು ದಿನದಲ್ಲಿ ದಾಟಿಹೋಗುವನು.

सूर्य के दो वर्षों का जो मार्ग वह चन्द्र दो पक्षों में पार करता है । वैसे ही सूर्य का एक महीने का जो मार्ग उसे सवा दो दिन में, सूर्य के एक पक्ष का मार्ग वह एक दिन में पार करता है ।


The Moon covers the distance of Sun of two years in two fortnights. In the same way the one month distance of the Sun is covered by the Moon in two and a quarter of days, and the distance of fortnight is covered in one day.

Wednesday, December 20, 2017

शास्त्रकोषः

एवं चन्द्रोऽर्करश्मिभ्यो लक्षयोजनमूर्ध्वतः । (देवीभागवतम् 8 स्कन्धः 16.17)

ಸೂರ್ಯಕಿರಣಗಳಿಗಿಂತ ಒಂದು ಲಕ್ಷ ಯೋಜನ ಮೇಲೆ ಚಂದ್ರಗ್ರಹವಿರುವುದು.

सूर्यकिरणों से एक लाख योजन उपर चन्द्र ग्रह मौजूद रहता है ।


The planet Moon lies one lakh Yojanas(1 Yojan = 9 miles) upwards from the Sun rays.

Tuesday, December 19, 2017

शास्त्रकोषः

वृश्चिकादिषु सूर्यो हि यदा सञ्चरते रविः ।
तदापीमान्यहोरात्राणि भवन्ति विपर्ययात् ॥ (देवीभागवतम् 8 स्कन्धः 14 .28 - 29)

ಸೂರ್ಯನು, ವೃಶ್ಚಿಕ, ಧನು, ಮಕರ, ಕುಂಭ, ಮೀನರಾಶಿಗಳಲ್ಲಿ ಸಂಚರಿಸುವ ಸಮಯದಲ್ಲಿ ಹಗಲಿನ ಅವಧಿಯು ಕಡಿಮೆಯಾಗಿರುತ್ತದೆ, ರಾತ್ರಿಯ ಅವಧಿಯು ಹೆಚ್ಚಾಗಿರುತ್ತದೆ.

वृश्चिक, धनु, मकर, कुंभ, मीन – इन राशियों में जब सूर्य संचरण करता है तब दिनों के हिसाब से रात्रियाँ लंबी रहती हैं ।


When the Sun travels in the Rashis called Vrishchika,Dhanu, Makara, Kumbha, Meena, the duration of the days is shorter than the nights.  

Monday, December 18, 2017

शास्त्रकोषः

वृषादिपञ्चसु यदा राशिष्वर्को विरोचते ।
तदाहानि च वर्धन्ते रात्रयोऽपि ह्रसन्ति च ॥ (देवीभागवतम् 8 स्कन्धः 14 .27- 28)

ಸೂರ್ಯನು ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಗಳಲ್ಲಿ ಸಂಚರಿಸುವ ಸಮಯದಲ್ಲಿ ಹಗಲಿನ ಅವಧಿಯು ಹೆಚ್ಚಾಗಿರುತ್ತದೆ. ರಾತ್ರಿಯ ಅವಧಿಯು ಕಡಿಮೆಯಾಗುತ್ತದೆ.

वृषभ, मिथुन, कर्क, सिंह, कन्या – इन राशियों में जब सूर्य संचरण करता है तब रात्रियों के हिसाब से दिन लंबे रहते हैं रात्रियों का काल कम रहता है ।


When the Sun travels in the Rashis called Rishabha, Karka, Simha, Kanya, the duration of the days is longer than the nights.

Sunday, December 17, 2017

शास्त्रकोषः

यदा तु मेषतुलयोः सञ्चरेद्धि दिवाकरः ।
समानानि त्वहोरात्राण्यातनोति त्रयीमयः ॥(देवीभागवतम् 8 स्कन्धः 14 .26 - 27)

ಸೂರ್ಯನು ಮೇಷ ಹಾಗೂ ತುಲಾರಾಶಿಗಳಲ್ಲಿ ಸಂಚರಿಸುವ ಸಮಯದಲ್ಲಿ ಹಗಲು ಹಾಗೂ ರಾತ್ರಿಗಳ ಕಾಲಾವಧಿಯು ಸಮಾನತೆಯನ್ನು ಪಡೆದಿರುತ್ತದೆ.

मेष और तुला राशि में जब सूर्य संचरण करता है तब दिन और रात्रि का काल समान रहता है ।


When the Sun travels in the two Rashis called Mesha and Tula the duration of the days is equal to that of nights. 

Saturday, December 16, 2017

शास्त्रकोषः

दाक्षिण्यमेकं सुभगत्वहेतुर्विद्वेषणं तद्विपरीतचेष्टा ।
मन्त्रौषधाद्यैः कुहकप्रयोगैर्भवन्ति दोषा बहवो न शर्म ॥ (बृहत्संहिता 75 - 5)

 ಒಬ್ಬ ವ್ಯಕ್ತಿಯ (ಸ್ತ್ರೀ/ಪುರುಷ) ಮನಸ್ಸಿನ ಸ್ಥಿತಿಯನ್ನರಿತು ವ್ಯವಹರಿಸುವುದರಿಂದ ಆ ವ್ಯಕ್ತಿಯ ಮನವೊಲಿಸಬಹುದು. ಅಂದರೆ ಆಕರ್ಷಕ ವ್ಯಕ್ತಿತ್ವವೇ ಸ್ತ್ರೀ ಅಥವಾ ಪುರುಷನನ್ನು ಸೆಳೆಯುವ  ಸುಲಭಮಾರ್ಗ. ಒಬ್ಬ ವ್ಯಕ್ತಿಯ ಮನಸ್ಸಿಗೆ ನೋವನ್ನುಂಟುಮಾಡುವ ವರ್ತನೆಯಿಂದ ಅವನ ದ್ವೇಷಕ್ಕೊಳಗಾಗಬೆಕಾಗಿದೆ. ಆ ವ್ಯಕ್ತಿಯೇ ದೂರ ಸರಿಯಬಹುದು. ಯಂತ್ರ -ಮಂತ್ರ - ಔಷಧ ಪ್ರಯೋಗವೇ ಮೊದಲಾದ ದುಷ್ಟಕಾರ್ಯಗಳಿಂದ ಜನರನ್ನೊಲಿಸುವ ಕ್ರಮ ಲೋಕದಲ್ಲಿ ಪ್ರಚಲಿತವಿದೆ. ಆದರೆ ಇವುಗಳಿಂದಾಗಿ ಹಲವಾರು ಅಡ್ಡಪರಿಣಾಮಗಳುಂಟಾಗುತ್ತವೆ. ಆದ್ದರಿಂದ ಇದು ಜನರ ಮನವೊಲಿಸುವ ಸರಿಯಾದ ಮಾರ್ಗವಲ್ಲ.

 किसी व्यक्ति के (स्त्री/पुरुष) प्राप्ति के लिए उस व्यक्ति के मनोनुकूल (मनोगत को जानते हुए तदनुकूल ) कार्य करना है । तथा उसके प्रतिकूल आचरण करने से द्वेष पैदा होता है। किसी भी व्यक्ती को स्ववश लाने (वशीकरण) के लिए विस्मयोत्पादक मन्त्र औषधादि का प्रयोग करते है । उससे भला नही होगा बल्कि अनेक प्रकार के अन्य दोष भी उत्पन्न होसक्ते है ।


A favourable attitude is the sole cause of winning the affection of someone; a contrary conduct produce hatred. Spell, drugs and such other evil remedies produce only many side effects, and not happiness.

Friday, December 15, 2017

शास्त्रकोषः

स्निग्धाः प्रलम्बशाखाः वामनविकटद्रुमाः समीपजलाः।
सुषिरा जर्जरपत्रा रूक्षाश्च जलेन सन्त्यक्ताः ॥(बृहत्संहिता 54 - 49)

ಕಾಂತಿಯುಕ್ತವಾದ ಎಲೆಗಳಿಂದ ಶೋಭಿಸುತ್ತಿರುವ, ಗಿಡ್ಡ ಹಾಗೂ ವಿಸ್ತಾರವಾಗಿ ಹರಡಿಕೊಂಡಿರುವ, ಉದ್ದನೆಯ ಇಳಿಬಿದ್ದ ರೆಂಬೆಕೊಂಬೆಗಳಿಂದ ಪುಷ್ಟವಾದ ಮರಗಿಡಗಳು ಬೆಳೆದಿರುವ ಜಾಗದಲ್ಲಿ ಅತ್ಯಂತ ಮೇಲ್ಭಾಗದಲ್ಲೇ ಅಂತರ್ಜಲವಿದೆಯೆಂದು ತಿಳಿಯಬೇಕು. ಟೊಳ್ಳಾದ, ಕಾಂತಿವಿಹೀನವಾಗಿ ಬಾಡಿಹೋದ ಎಲೆಗಳನ್ನು ಹೊಂದಿರುವ, ಒಣಗಿದ ಮರಗಳನ್ನು ಹೊಂದಿರುವ ಜಾಗದಲ್ಲಿ ಅಂತರ್ಜಲವು ಇರುವುದಿಲ್ಲ.

जहाँ निर्मल लंबी शाखाओं  से युक्त छोटे – छोटे विस्तृत वृक्ष हों,  वहाँ जल मूल निकट में होता है, और जहाँ अन्तः सारवाले ;  वर्ण रहित पत्तेवाले रूखे सूखे वृक्ष हों  वहाँ जलाभाव होता है ।

Those trees which are glossy, which have magnificent leaves, which are short and widespread have water nearby (i.e. there must be water under the ground in such places). Whereas, those that are hollow, have pale leaves, and are dry, do not indicate water in the neighbourhood.

Thursday, December 14, 2017

शास्त्रकोषः

प्रग्रहणान्ते धूम्रः खण्डग्रहणे शशी भवति कृष्णः ।
सर्वग्रासे कपिलः स कृष्णताम्रस्तमोमध्ये ॥(आर्यभटीयम्, 4.46)

ಚಂದ್ರಗ್ರಹಣದ ಸ್ಪರ್ಶಕಾಲದಲ್ಲಿ (ಗ್ರಹಣಾರಂಭದಲ್ಲಿ) ಮೋಕ್ಷಕಾಲದಲ್ಲಿ (ಗ್ರಹಣಸಮಾಪ್ತಿಯ ಕಾಲದಲ್ಲಿ) ಚಂದ್ರನ ಬಿಂಬವು ಬೂದುಬಣ್ಣದಲ್ಲಿ ಕಂಡುಬರುತ್ತದೆ. ಖಂಡಗ್ರಹಣದ ಕಾಲದಲ್ಲಿ (ಚಂದ್ರನು ಅರ್ಧಗ್ರಸ್ತವಾದಾಗ) ಚಂದ್ರಬಿಂಬವು ಕಪ್ಪಾಗಿ (ತೀಕ್ಷ್ಣವಾದ ಬಣ್ಣದಿಂದ) ಗೋಚರಿಸುತ್ತದೆ. ಸರ್ವಗ್ರಾಸವಾದಾಗ (ಗ್ರಹಣಕಾಲದಲ್ಲಿ) ಚಂದ್ರಬಿಂಬವು ಕಪಿಲವರ್ಣದಲ್ಲಿ ಕಂಡುಬರುತ್ತದೆ. ಭೂಚ್ಛಾಯೆಯಲ್ಲಿ ಸಂಪೂರ್ಣವಾಗಿ ಪ್ರವೇಶಿಸಿದ ಚಂದ್ರನು ಕಡುಕೆಂಪುಬಣ್ಣದಿಂದ ಗೋಚರಿಸುತ್ತಾನೆ.

चन्द्रग्रहण के स्पर्श (आरम्भकाल) और मोक्ष (समाप्ति काल) में चन्द्रमा धूम्र वर्ण से दिखता है । खण्डग्रहण में (बिम्ब का आधाभाग ग्रस्त होने पर) कृष्णवर्ण से दिखाई देता है । सर्वग्रास (ग्रहण काल मे) कपिल वर्ण होता है । चन्द्रमा की सर्वग्रहण मे (अर्थात सम्पूर्ण भूच्छाया में प्रविष्ट होने पर) ताँबे जैसा रंग होता है ।

The moon appears grey colored during the starting and end of lunar eclipse. When half obscured, moon looks black(dark colored), whereas when the moon totally obscured, moon appears reddish in color. When the moon enters far inside the earth’s shadow it appears dark red.    

       

Wednesday, December 13, 2017

शास्त्रकोषः

मृद्वी भूः सर्ववृक्षाणां हिता तस्यां तिलान् वपेत् ।
पुष्पितांस्तांश्च मृद्नीयात् कर्मैतत् प्रथमं भुवः ॥ (बृहत्संहिता 55.2)

ಸಸ್ಯಗಳನ್ನು ನೆಡುವುದಕ್ಕಾಗಿ ಆರಿಸಿದ ಮೃದುವಾದ ನೆಲದಲ್ಲಿ ಎಳ್ಳನ್ನು ಬಿತ್ತಬೇಕು. ಎಳ್ಳಿನ ಸಸಿಗಳು ಅಂಕುರಿಸಿ, ಸಸ್ಯವಾದಾಗ ಅಲ್ಲಲ್ಲೇ ಮಣ್ಣಿನ ಜೊತೆಯಲ್ಲಿ ಮರ್ದಿಸಿ ಮಿಶ್ರಗೊಳಿಸಬೇಕು. ಹೀಗೆ ಕೃಷಿಭೂಮಿಯಲ್ಲಿ ಕೈಗೊಳ್ಳಬೇಕಾದ ಮೊತ್ತಮೊದಲ ಕಾರ್ಯವಿದು.

जिस भूमि में सस्य लगवाना हो उसमे पहले तिल बोना चाहिये और जब वे (तिल सस्यों) फूल जाएं तब उनको उसी भूमि में मर्दन कर देना चाहिये । बगीचा लगवाने कि भूमि कोमलता पैदा करने का पहला कर्म हैं ।


Soft soil is favorable to growth of all trees. In soft soiled land, first of all one ought to sow the sesame seeds, when it gets bloomed, cut into pieces and crushed to mingle with the soil. It would become as green manure for preparing the soil for further cultivation. This is the first treatment to be done for the soil.

Tuesday, December 12, 2017

शास्त्रकोषः

तादृशेन कृतं कर्म निष्फलं विद्धि भामिनि ।
तस्मान्न्यायागतेनैव दातव्यं शुभमिच्छता ॥(महाभारतम्)

ಅನ್ಯಾಯ್ಯದಿಂದ ಸಂಪಾದಿಸಿದ ಹಣದಿಂದ ಆಚರಿಸುವ ಕರ್ಮಗಳು ಶುಭಫಲವನ್ನು ನೀಡಲಾರವು. ಆದ್ದರಿಂದ ನ್ಯಾಯ್ಯಮಾರ್ಗದಿಂದ ಸಂಪಾದಿಸಿದ ಹಣದಿಂದಲೇ ಕರ್ಮವನ್ನಾಚರಿಸಬೇಕು.

अन्याय के मार्ग से प्राप्त हुई संपत्ति से किया हुआ कर्म शुभफल नहीं देता । उसकी वजह से जो धन न्यायपथ से मिले उससे ही कर्म करन उचित है ।


The actions performed by using the wealth which is earned through unjustified ways do not give good results. Therefore one should perform the actions by using the wealth which is earned through justified ways.

Monday, December 11, 2017

शास्त्रकोषः

परोपघाताद् यद्‍द्रव्यं चौर्याद् वा लभ्यते नृभिः ।
निर्दयाल्लभ्यते यच्च धूर्तभावेन वै तथा ।
अधर्माद् अर्थमोहाद्वा बहूनामुपरोधनात् ।
लभ्यते यद्धनं देवि तदत्यन्तविगर्हितम् ॥(महाभारतम्)

ಯಾವ ಹಣವು/ಸಂಪತ್ತು ಪರಪೀಡನೆಯಿಂದ, ಕಳ್ಳತನದಿಂದ, ನಿಷ್ಕಾರುಣ್ಯದಿಂದ, ಧೂರ್ತತನದಿಂದ, ಅಧರ್ಮದಿಂದ, ಲೋಭದಿಂದ ಅಥವಾ ಬಹಳಷ್ಟು ಒತ್ತಡದಿಂದಾಗಿ ಲಭಿಸುವುದೋ ಆ ಹಣವು ಅತ್ಯಂತ ನಿಂದನೀಯವಾಗಿದೆ. 
  
जो धन/संपत्ति दूसरों को पीडा देकर, चोरीकरके, करुणारहित कृति से, कपट से, अधर्मसे, लोभ से अथवा बहुत लोगों को दिए हुए कष्टों से प्राप्त होती है वह निंदापात्र रहता है ।


The wealth which is earned by troubling others, by theft, by cruelty, crook, by injustice due to avidity or by giving miseries to masses is considered as reprehended/criticized.  

Sunday, December 10, 2017

शास्त्रकोषः

उपाध्यायं पितरं मातरं च येऽभिद्रुहुर्मनसा कर्मणा वा ।
तेषां पापं भ्रूणहत्याविशिष्टं तेभ्यो  नान्यः पापकृदस्ति लोके ॥(महाभारतम्)

ಯಾವನು ಕ್ರಿಯೆಯಿಂದಾಗಲೀ ಮನಸ್ಸಿನಲ್ಲೇ ಆಗಲೀ ತಾಯಿ/ ತಂದೆ/ ಅಧ್ಯಾಪಕರಿಗೆ ದ್ರೋಹವೆಸಗುವನೋ ಆತನಿಗೆ ಭ್ರೂಣಹತ್ಯೆಗಿಂತಲೂ ಘೋರವಾದ ಪಾಪವು ಅಂಟಿಕೊಳ್ಳುವುದು.

किसी भी क्रिया से या फिर मन में ही उपाध्याय पिता और माता को द्रोह करने वाले को भ्रूणहत्या से भी बढकर पाप प्राप्त होता है ।


If we betray our teacher, Father or Mother by any of our action or by our mind then it is considered to be more sinful than foeticide.

Saturday, December 9, 2017

शास्त्रकोषः

मानसाद् वाङ्‍मयं पापं विशिष्टमिति लक्ष्यते ।
वाङ्मयादपि वै पापाच्छारीरं गण्यते बहु ॥(महाभारतम्)

ಮನಸ್ಸಿನಿಂದ ಉಂಟಾಗುವ ಪಾಪಕ್ಕಿಂತ ಮಾತಿನಿಂದ ಉಂಟಾಗುವ ಪಾಪವು ಹೆಚ್ಚು ತೀವ್ರವಾಗಿರುವುದು. ಅದಕ್ಕಿಂತಲೂ ಹೆಚ್ಚು ತೀವ್ರವಾಗಿರುವುದು ಶರೀರದಿಂದ ಉಂಟಾಗುವ ಪಾಪ.

मन के द्वारा उत्पन्न होने वाले पाप से शब्दों द्वारा किया जाने वाला पाप ज्यादा तीव्र रहता है ।उससे भी ज्यादा तीव्रता शरीर से किये जानेवाले पाप मे रहती है ।


The sin which is caused by words is more extreme than the one caused by mind. The sin caused by our body is even more extreme. 

Friday, December 8, 2017

शास्त्रकोषः

धृतिः क्षमा दमोऽस्तेयं शौचमात्मविनिग्रहः ।
धीर्विद्या सत्यमक्रोधो दशकं धर्मलक्षणम् ॥ (मनुस्मृतिः)

ಧೈರ್ಯ, ಕ್ಷಮಾಗುಣ, ಮನೋನಿಗ್ರಹ, ಕದಿಯದಿರುವುದು, ಶುಚಿತ್ವ, ಇಂದ್ರಿಯನಿಗ್ರಹ, ಬುದ್ಧಿ, ವಿದ್ಯೆ, ಸತ್ಯ, ಕೋಪವಿಲ್ಲದಿರುವಿಕೆ – ಹೀಗೆ ಧರ್ಮವು ಹತ್ತುವಿಧವಾಗಿರುವುದು.

धैर्य, क्षमा, मन का निग्रह, चोरी न करना, शुचित्व, इंद्रियनिग्रह, बुद्धि, विद्या, सत्य, कोपराहित्य, यह दसप्रकार के धर्मलक्षण है ।


Courage, forgiveness, control over mind, non stealing, cleanliness, control over sense organs, intellect, knowledge, truthfulness, non anger – are the 10 kinds of Dharma.  

Thursday, December 7, 2017

शास्त्रकोषः

नभस्ययस्कान्तमहामणीनां मध्ये स्थितो लोहगुडो यथाऽऽस्ते ।
आधारशून्योऽपि तथैव सर्वाधारो धरित्र्या ध्रुवमेवगोलः ॥(सिद्धान्तशेखरः 15.22)

ಹೇಗೆ ಅಯಸ್ಕಾಂತಗೋಲಗಳ ಮಧ್ಯದಲ್ಲಿರುವ ಲೋಹಖಂಡವು ಕಾಂತೀಯ ಶಕ್ತಿಯಿಂದಾಗಿ ಯಾವುದೇ ಆಧಾರವಿಲ್ಲದೇ ನಿಂತಿರುತ್ತದೋ ಅದೇ ರೀತಿ ಎಲ್ಲರಿಗೂ ಆಶ್ರಯಸ್ಥಾನವಾಗಿರುವ ಭೂಮಿಯು ಯಾವುದೇ ಆಧಾರವಿಲ್ಲದೇ ಆಕಾಶದಲ್ಲಿ ನಿಂತಿದೆ.

चुम्बकों के बीच में स्थित लोहें की गुटिका के समान, पृथ्वी भी बिना आधार आसमान में स्थित होती है, जो सभी पदार्थों का आश्रय स्थान है ।


As the iron piece lies in between the magnetic sphere independently, the life support system of all called as Earth lies independently in the sky.  

Wednesday, December 6, 2017

शास्त्रकोषः

उष्णत्वमर्कशिखिनोः शिशिरत्वमिन्दौ काठिन्यमश्मनि नभस्वति चञ्चलत्वम् ।
नैसर्गिकी च पयसि द्रवता तथेह निर्हेतुरेवमवनेः स्थितिरन्तरिक्षे ॥(सिद्धान्तशेखरः 15.21)

ರವಿಯಲ್ಲಿ ಉಷ್ಣತೆ, ಚಂದ್ರನಲ್ಲಿ ಶೀತಲತೆ, ಶಿಲೆಯಲ್ಲಿ ಕಠಿಣತೆ, ವಾಯುವಿನಲ್ಲಿ ಪ್ರವಹಿಸುವಿಕೆ, ನೀರಿನಲ್ಲಿ ದ್ರವತ್ವ, ಹೀಗೆ ಆಯಾಯಾ ವಸ್ತುಗಳಲ್ಲಿ ನೈಸರ್ಗಿಕವಾದ ಗುಣಗಳಿರುವಂತೆ ಭೂಮಿಗೆ ಅಂತರಿಕ್ಷದಲ್ಲಿ ಯಾವುದೇ ಆಧಾರವಿಲ್ಲದೆ ನಿಲ್ಲುವ ನೈಸರ್ಗಿಕವಾದ ಗುಣವಿದೆ.

 जैसे सूर्य में गर्मी होती है तथा चन्द्रमा में शीतलता होती है पत्थर में कठिनता होती है आकाश में वायु द्रुतता से चलती है, जल में द्रवत्व नैसर्गिक होती है उसी प्रकार पृथ्वी में अन्तरिक्ष में बिना सहारे के रहने की शक्ति होती है ।


The Earth lies independently in the universe naturally, without any supportive system exactly like the hotness of the Sun, calmness of the Moon, hardness of a stone, flowness of air, and liquidity of water. 

Tuesday, December 5, 2017

शास्त्रकोषः

प्रेरकः सूचकश्चैव वाचको दर्शकस्तथा ।
शिक्षको बोधकश्चैव षडेते गुरवः स्मृता ॥ (कुलार्णवतन्त्रम्  13.128)

ಪಾರಮಾರ್ಥಿಕ ಸತ್ಯದ ಕಡೆಗೆ ಹೋಗಲು ಅನುಕೂಲವಾಗುವಂತೆ ಪ್ರೇರಣೆ ನೀಡುವವನು, ಸೂಚನೆ ನೀಡುವವನು, ತಿಳಿಹೇಳುವವನು, ತೋರಿಸಿಕೊಡುವವನು, ಶಿಕ್ಷಣ ನೀಡುವವನು, ಬೋಧಿಸುವವನು- ಹೀಗೆ ಆರು ವಿಧವಾದ ಗುರುಗಳು ಮಾರ್ಗದರ್ಶನ ನೀಡುವರು.

One who influences us to go in the path of otherworldly truth, one who notifies us, one who preaches, one who demonstrates, one who educates, one who instructs – like this there are 6 types of Gurus who guide us.


जो हमें पारमार्थिकसत्य के मार्ग पर जाने की प्रेरणा देता है, सूचनाएं देता है, सिखाता है, प्रदर्शन कराता है, शिक्षण देता है, और बोधन करता है – यह छह प्रकार के गुरु हमें मार्गदर्शन करते हैं ।

Monday, December 4, 2017

शास्त्रकोषः

गुशब्दस्त्वन्धकारः स्याद् रु शब्दस्तन्निरोधकः ।
अन्धकारनिरोधित्वात्  गुरुरित्यभिधीयते ॥ (कुलार्णवतन्त्रम्  17.7)

’ಗು’ ಎಂದರೆ ಅಂಧಕಾರ. ’ರು’ ಎಂದರೆ ನಾಶಕ. ಅಜ್ಞಾನವೆಂಬ ಅಂಧಕಾರವನ್ನು ನಾಶಪಡಿಸುವವನೇ “ಗುರು” ಎಂಬುದಾಗಿ ಕರೆಯಲ್ಪಡುತ್ತಾನೆ.

‘Gu’ means darkness. ‘Ru’ means that which destroys. One who destroys the darkness called ignorance is called as “Guru”.

‘गु’ का अर्थ है अन्धःकार । ‘रु’ का मतलब है नाशक । जो अन्धःकार मिटाता है वह गुरु है । 

Sunday, December 3, 2017

शास्त्रकोषः

गुरुस्त्रिवारमाचारं कथयेच्च कुलेश्वरि ।
न गृह्णाति हि शिष्यश्चेत्तदा पापं गुरोर्नहि ॥ (कुलार्णवतन्त्रम्  11.108)

ಶಿಷ್ಯನು ಕರ್ತವ್ಯ ಕರ್ಮದಲ್ಲಿ ಪ್ರವೃತ್ತನಾಗುವಂತೆ ಹಾಗೂ ನಿಷಿದ್ಧ ಕರ್ಮಗಳಿಂದ ನಿವೃತ್ತನಾಗುವಂತೆ ಆತನನ್ನು ಮತ್ತೆ ಮತ್ತೆ ಉಪದೇಶಿಸುವುದು ಗುರುವಿನ ಕರ್ತವ್ಯವಾಗಿದೆ. ಮೂರುಬಾರಿ ತಿಳಿಹೇಳಿದ ಬಳಿಕವೂ ಶಿಷ್ಯನು ಅದನ್ನು ಸ್ವೀಕರಿಸದೇ ಉದ್ಧಟತನದಿಂದ ವರ್ತಿಸಿದರೆ ಶಿಷ್ಯನೇ ಪಾಪಭಾಗಿಯಾಗುವನು, ಗುರುವಿಗೆ ಪಾಪ ಬರಲಾರದು.

It is Guru’s duty to tell his disciple to participate in the right duties and to step back from the prohibited activities. If the disciple acts with masterfulness and doesn’t listen to the Guru even after three times then it does not cause any iniquity for the Guru, disciple will only become sinner.    


योग्य कार्यों में सहभाग लेने को और बूरे कार्यों से पीछे हटने को शिष्य को कहना यह गुरु का कर्तव्य है । यदि शिष्य उद्ध्टवृत्ति से आचरण करें और गुरु ने तीन बार कहनेपर भी उसकी वाणी न सुने तो गुरु को पाप नहीं लगता बल्कि शिष्य ही पापभाक हो जाता है । 

Saturday, December 2, 2017

शास्त्रकोषः

स्वयमाचरते  शिष्यान् आचारे स्थापयत्यपि ।
अचिनोतीह शास्त्रार्थान् आचार्यस्तेन कथ्यते ॥ (कुलार्णवतन्त्रम्  17. 11)

ಯಾವನು ವೇದವೇದಾಂಗಾದಿ ಅನೇಕ ಶಾಸ್ತ್ರಗಳ  ಸಾರವನ್ನು ಅರಿತುಕೊಂಡವನಾಗಿದ್ದು, ಶಾಸ್ತ್ರೋಕ್ತವಾದ ಸದಾಚಾರವನ್ನು ಅನುಸರಿಸುತ್ತಾ ಶಿಷ್ಯರನ್ನು ಸನ್ಮಾರ್ಗದಲ್ಲಿ  ಮುನ್ನಡೆಸುವನೋ ಆತನೇ ಆಚಾರ್ಯ ಎನಿಸುವನು. 

The one who has the knowledge of Shastras, one who performs his duties accordingly to the Shastras and who leads his disciples in the right path can be called as Acharya.

जो वेद और वेदांग विषयों को जानता है, जो शास्त्रोक्तसदाचार निभाता है, और अपने शिष्य को सही रास्ते पर लेकर जाता है उसे आचार्य कहते है ।