Thursday, November 30, 2017

शास्त्रकोषः

यथा कपिश्च शाखायां शाखामुल्लंघ्य यत्नतः ।
फलं प्राप्नोति धर्मस्य चोपदेशस्तथा प्रिये ॥( कुलार्णवतन्त्रम् 14.32)

ಕಪಿಯು ಮರದ ಒಂದು ರೆಂಬೆಯಿಂದ ಇನ್ನೊಂದು ರೆಂಬೆಗೆ ವಿಶೇಷಪ್ರಯತ್ನದಿಂದ ಜಿಗಿಯುತ್ತಾ ಹಣ್ಣನ್ನು ಅರಸುತ್ತಾ ಮರದ ತುದಿಯನ್ನು ತಲುಪಿ ಹಣ್ಣನ್ನು ಪಡೆಯುತ್ತದೆ. ಹಾಗೆಯೇ ಧರ್ಮಾಚರಣೆಯು ಮಾನವನಿಗೆ ಎದುರಾಗಬಲ್ಲ ಅಡ್ಡಿ, ಆತಂಕಗಳಿಂದ ಆತನನ್ನು ಪಾರುಮಾಡಿ ಅತಿ ವಿಳಂಬವಿಲ್ಲದೆ ಸಂಸಾರವೃಕ್ಷದ ಸಾರವಾಗಿರುವ  ಅಮೃತತ್ವವೆಂಬ ಫಲದ ಬಳಿಗೆ ಕರೆದೊಯ್ಯಬಲ್ಲದು.

जैसे कोई बन्दर वृक्ष की एक शाखा से दूसरी शाखा पर प्रयत्न से कूदकर, फलों को ढूंढते हुए, वृक्ष की चोटि पर पहुंचकर फल प्राप्त करता है, वैसे ही धर्म का आचरण भी मनुष्य के कष्टों से उसको पार करता है, और संसाररूपी वृक्ष के अमृतत्व नामक फल के पास बिना देरी से लेकर जाता है ।

A monkey jumps on the tree from one branch to the other, searching to the fruits, and gets the fruit reaching at the top of the tree. In the same way, following Dharma makes us go through our miseries safely to reach to the fruit known as immortality.

Wednesday, November 29, 2017

शास्त्रकोषः

यथा पिपीलिका मन्दमन्दं वृक्षाग्रगं फलम् ।
चिरेणाप्नोति कर्मोपदेशश्चापि तथा स्मृतः ॥(कुलार्णवतन्त्रम् 14.31)

ಮರದ ಬುಡದಲ್ಲಿರುವ ಇರುವೆಯು ವಿಶೇಷಪ್ರಯತ್ನವಿಲ್ಲದೇ ನಿಧಾನವಾಗಿ ಚಲಿಸುತ್ತಾ ಚಲಿಸುತ್ತಾ ಬಹಳ ಕಾಲದ ಬಳಿಕ ಮರದ ತುದಿಯಲ್ಲಿರುವ ಹಣ್ಣನ್ನು ತಲುಪಬಲ್ಲದು. ಹಾಗೆಯೇ ಕರ್ಮಾಚರಣೆಯು ಮಾನವನನ್ನು ಅತಿದೀರ್ಘಕಾಲದ ಬಳಿಕ ಸಂಸಾರವೃಕ್ಷದ ಸಾರವಾಗಿರುವ ಅಮೃತತ್ವವೆಂಬ ಫಲದ ಬಳಿಗೆ ಕರೆದೊಯ್ಯಬಲ್ಲದು.

जैसे कोई चींटी मन्द गति से बिना विशेष प्रयत्न चलकर सहज ही वृक्ष की चोटी तक पहुंचकर फल प्राप्त करती है, वैसे हमारे कर्म धीरे से अमृतत्व तक हमे लेकर जाते हैं । यह हमारे संसाररूपी वृक्ष का सार है ।


An ant which is beneath the tree can reach the fruit present in the top branch slowly without any special efforts. In the same way our actions can take us to immortality which is the essence of life even after a long time.

Tuesday, November 28, 2017

शास्त्रकोषः

योगमार्गेण शिष्यस्य देहमाविश्य यद्गुरुः ।
 बोधयेद्देवतातत्त्वं सा दीक्षा यौगिकी मता ॥ (पुराणसारः -४०.६०)

ಗುರುವು ಯೋಗಬಲದಿಂದ ಶಿಷ್ಯನ ದೇಹವನ್ನು ಪ್ರವೇಶಿಸಿ ದೇವತಾತತ್ತ್ವವನ್ನು ಬೋಧಿಸಿ ಅನುಗ್ರಹಿಸುವನು. ಇದನ್ನು ಯೌಗಿಕದೀಕ್ಷೆ ಎನ್ನಲಾಗುವುದು.

गुरु योगबल के आधार से शिष्य के देह में प्रवेश कर के, देवता तत्त्व का बोध करा के अनुग्रह करते हैं । यह यौगिक दीक्षा है ।


The Guru enters the body of his disciple with the help of power of Yoga, to teach the divine principles which is called as Yougik initiation.

Monday, November 27, 2017

शास्त्रकोशः

दिव्यानामपि मन्त्राणां यद्व्याख्यानेन देशिकः ।
शिष्यायोपदिशेत् तत्त्वं सा दीक्षा तान्त्रिकी स्मृता ॥ (पुराणसारः -४०.६५)

ಗುರುವು ದಿವ್ಯಮಂತ್ರಗಳ ಗೂಢಾರ್ಥ, ತಾತ್ಪರ್ಯ, ಭಾವಗಳನ್ನು ಶಿಷ್ಯನಿಗೆ ವಿವರಿಸಿ ಮಂತ್ರವನ್ನು ಉಪದೇಶಿಸುವನು. ಇದನ್ನು ತಾಂತ್ರಿಕದೀಕ್ಷೆ ಎನ್ನಲಾಗುವುದು.

गुरु दिव्य मन्त्रों के गूढार्थ, तात्पर्य और भावों का विवरण शिष्य को देकर मन्त्र का उपदेश करते हैं जिसको तान्त्रिक उपदेश कहते है ।

The Guru elaborates the deep meaning of the spells and preaches  it to his disciple which is called as Taantrik initiation.   


Sunday, November 26, 2017

शास्त्रकोषः

संचित्य हृदये तत्त्वं कर्णे शिष्यस्य यद्गुरुः ।
मन्त्रमुच्चारयेत् सम्यक् सा दीक्षा मान्त्रिकी भवेत् ॥ (पुराणसारः -४०.६४)

ಗುರುವು ದೇವತಾಸ್ವರೂಪವನ್ನು ಹೃದಯದಲ್ಲಿ ಚೆನ್ನಾಗಿ ಧ್ಯಾನಿಸಿ ಶಿಷ್ಯನ ಕಿವಿಯಲ್ಲಿ ಮಂತ್ರವನ್ನು ಉಚ್ಚಾರಿಸಿ ಅನುಗ್ರಹಿಸುವನು. ಇದನ್ನು ಮಾಂತ್ರಿಕದೀಕ್ಷೆ ಎನ್ನಲಾಗುತ್ತದೆ.

देवता के स्वरूप का हृदय में ध्यान करके गुरु शिष्य के कान में मन्त्र उच्चारण करके अनुग्रह करते है, यह मान्त्रिक दीक्षा है ।  


The Guru meditates upon God in his heart and utters the spells in his disciple’s ear which is called as Maantrik initiation.

Saturday, November 25, 2017

शास्त्रकोषः

यथा कूर्मः स्वतनयान् ध्यानमात्रेण पोषयेत् ।
वेधदीक्षोपदेशश्च मानसः स्यात् तथाविधः ॥(कुलार्णवतन्त्रम् 14.37)

ಆಮೆಯು ತನ್ನ ಶಿಶುಗಳನ್ನು ಚಿಂತನಮಾತ್ರದಿಂದಲೇ ಪೋಷಿಸುವಂತೆ ಗುರುವು ಧ್ಯಾನದಿಂದಲೇ ಶಿಷ್ಯನಿಗೆ ದೀಕ್ಷೆಯನ್ನು ಅನುಗ್ರಹಿಸುವನು ಇದನ್ನು ವೇಧದೀಕ್ಷೆ ಎನ್ನುವರು.

जैसे कछुआ माँ अपने बच्चों की देखभाल विचारों से ही करती है वैसे गुरु ध्यान के द्वारा ही शिष्य को दीक्षा देते है । यह वेध दीक्षा है ।


The way a tortoise looks after its hatchlings by its thoughts only, the Guru offers the initiation to his disciple through meditation. This is called as the Vedha initiation.   

Friday, November 24, 2017

शास्त्रकोषः

स्वापत्यानि यथा मत्स्यो वीक्षणेनैव पोषयेत् ।
दृग्भ्यां दीक्षोपदेशश्च तादृशः परमेश्वरि ॥(कुलार्णवतन्त्रम् 14.36)

ಮೀನು ತನ್ನ ಮರಿಗಳನ್ನು ವೀಕ್ಷಿಸುತ್ತಲೇ ಪೋಷಿಸುವಂತೆ ಗುರುವು ತನ್ನ ದೃಷ್ಟಿಯಿಂದಲೇ ಶಿಷ್ಯನಿಗೆ ದೀಕ್ಷೆಯನ್ನು ಅನುಗ್ರಹಿಸುವನು. ಇದನ್ನು ದೃಗ್‍ದೀಕ್ಷೆ ಎನ್ನುವರು.

जैसे मछली अपने बच्चों की देखभाल उनको देखते देखते ही करती है वैसे गुरु अपनी दृष्टि से ही शिष्य को दीक्षा देकर अनुगृहीत करते हैं । यह दृगदीक्षा है ।


As a fish looks after its fries by its vision only, The Guru offers the initiation to his disciple by his vision too. This is called as visual initiation. 

Thursday, November 23, 2017

शास्त्रकोषः

यथा पक्षी स्वपक्षाभ्यां शिशून् संवर्धयेच्छनैः ।
स्पर्शदीक्षोपदेशश्च तादृशः कथितः प्रिये ॥(कुलार्णवतन्त्रम् 14.35)

ದೀಕ್ಷೆಯು ಹಲವು ವಿಧವಾಗಿದೆ. ಹಕ್ಕಿಯು ತನ್ನ ಶಿಶುವನ್ನು ರೆಕ್ಕೆಗಳ ಮೂಲಕ ಪೋಷಿಸುವಂತೆ ಗುರುವು ಶಿಷ್ಯನಿಗೆ ಸ್ಪರ್ಶದಮೂಲಕ ದೀಕ್ಷೆಯನ್ನು ಅನುಗ್ರಹಿಸುವನು. ಇದು ಸ್ಪರ್ಶದೀಕ್ಷೆ.

विविध प्रकार की दीक्षाएं रहती है । जैसे पक्षी अपने बच्चों की रक्षा अपने परों से करते हैं वैसे गुरु शिष्य को स्पर्श के द्वारा दीक्षा देकर अनुग्रह करते हैं । यह स्पर्श दीक्षा है ।


There are different types of initiation. As a bird protects its chicks by its wings, in the same way a guru preaches the initiation to his disciple by touching him. This is called as Sparsha initiation.  

Wednesday, November 22, 2017

शास्त्रकोषः

दिव्यभावप्रदानाच्च क्षालनात् कल्मषस्य च ।
दीक्षेति कथिता सद्भिः भवबन्धविमोचनात् ॥(कुलार्णवतन्त्रम् 9.51)

ಗುರುವು ಶಕ್ತಿಪಾತದ ಮೂಲಕ ಶಿಷ್ಯನ ಮೋಕ್ಷಮಾರ್ಗದಲ್ಲಿರುವ ಅಡೆತಡೆಗಳನ್ನು ಕಿತ್ತೆಸೆದು, ಪಶುಪ್ರವೃತ್ತಿಗಳನ್ನು ನಿವಾರಿಸಿ ದಿವ್ಯಸ್ವರೂಪವನ್ನು ಅನುಗ್ರಹಿಸುವನು. ಇದನ್ನು ’ದೀಕ್ಷಾ’ ಎನ್ನುವರು.

गुरु विशिष्ट शक्ति प्रदान करके, मोक्षके मार्ग में स्थित, संभावित बाधाओं का नाश करके, मन में रहनेवाली दुष्ट भावनाओं का विनाश करके एक दिव्य स्वरूप का बोध कराते हैं । इसीको दीक्षा कहते है ।


The Guru gives an unique energy to his disciple, he destroys the barriers of Moksha and also diminishes the evil thoughts in the mind to make his disciple, experience a divine thing/picture. This is called as Deeksha.   

Tuesday, November 21, 2017

शास्त्रकोषः

घृणा शङ्का भयं लज्जा जुगुप्सा चेति पञ्चमी ।
कुलं शीलं तथा जातिरष्टौ पाशाः प्रकीर्तिताः ॥(कुलार्णवतन्त्रम् 13.90)

ಕರುಣೆ, ಸಂಶಯ, ಭಯ, ಲಜ್ಜೆ, ಅಸಹ್ಯ, ಕುಲ, ಶೀಲ ಹಾಗೂ ಜಾತಿ – ಇವು 8 ವಿಧವಾದ ಪಾಶಗಳು.

करुणा, संशय, भय, शरम, कुल, शील, तथा जाति यह आठ प्रकार के पाश हैं ।


Mercy, doubt, fear, shame, ugh, clan, virtue and cast these are the 8 types of snares.

Monday, November 20, 2017

शास्त्रकोषः

पाशबद्धः पशुर्ज्ञेयः पाशमुक्तो महेश्वरः ।
तस्मात् पाशहरो यस्तु स गुरुः परमो मतः ॥(कुलार्णवतन्त्रम् 13.91)

ಎಂಟು ವಿಧವಾದ ಪಾಶಗಳಿಂದ ಬಂಧನಕ್ಕೊಳಗಾಗಿರುವ ಜೀವನೇ ಪಶು. ಯಾವುದೇ ಪಾಶಕ್ಕೆ ಒಳಗಾಗದಿರುವವನೇ ಈಶ್ವರನು. ಜೀವನನ್ನು ಪಾಶದಿಂದ ಬಿಡುಗಡೆಗೊಳಿಸಬಲ್ಲವನೇ ಗುರು.

आठ प्रकार के पाशों से (बन्धनों से) बद्ध हुआ हीव ही पशु कहा जाता है । किसी भी बन्धन में न गिरनेवाला ईश्वर है । जीव को बन्धों से मुक्त करानेवाला ही गुरु है ।


The one who is arrested by 8 types of snares is called as a Jeeva. Who is free from all types of snares is called as Ishwara. One who releases us from snares is called as a Guru.

Sunday, November 19, 2017

शास्त्रकोषः

त्रसरेणुत्रिकं भुङ्क्ते यः कालः स त्रुटिः स्मृतः ।
शतभागस्तु वेधः स्यात् तैस्त्रिभिस्तु लवः स्मृतः ॥(श्रीमद्भागवतं 3.11.6)

ಮೂರು ತ್ರಸರೇಣುಗಳನ್ನು ದಾಟಲು ಸೂರ್ಯನಿಗೆ ತಗಲುವ ಸಮಯವನ್ನು ತ್ರುಟಿ ಎನ್ನುತ್ತಾರೆ. ತ್ರುಟಿಯ ನೂರುಪಟ್ಟು ಕಾಲವು ವೇಧ. ಮೂರು ವೇಧಗಳು ಒಂದು ಲವ.

तीन त्रसरेणुओं को पार करने के लिये सूर्यकिरणों को जितना वक्त लगता है, उसे त्रुटि कहते है । तीन गुना त्रुटि वेध है, तीन गुना वेध लव कहलाता है ।


The time taken by a ray of sunlight to cross a Trasarenu is called as Truti. Three times a Truti is Vedh and three times Vedh is called Lav.   

Saturday, November 18, 2017

शास्त्रकोषः

अणुर्द्वौ परमाणू स्यात् त्रसरेणुस्त्रयः स्मृतः ।
जालार्करश्म्यवगतः खमेवानुपतन्नगात् ॥(श्रीमद्भागवतं 3.11.5)

ಎರಡು ಪರಮಾಣುಗಳು ಸೇರಿ ಒಂದು ಅಣುವಾಗುತ್ತದೆ. ಮೂರು ಅಣುಗಳು ಸೇರಿ ಒಂದು ತ್ರಸರೇಣು ಆಗುವುದು. ಕಿಟಕಿಯ ಮೂಲಕ ಒಳಬರುವ ಸೂರ್ಯನ ಕಿರಣಗಳಲ್ಲಿ ಗೋಚರಿಸುವ ಈ ತ್ರಸರೇಣುಗಳು ಆಕಾಶದಲ್ಲಿ ಹಾರಾಡುತ್ತಾ ನಿಧಾನವಾಗಿ ಭೂಮಿಗೆ ಇಳಿಯುತ್ತಿರುತ್ತವೆ.

दो परमाणुओं से एक अणु बनता है । तीन अणुओं से एक त्रसरेणु बनता है । खिडकी से अंदर आनेवाली सूर्यकिरणों मेम दिखाइ देनेवाला यह त्रसरेणु आकाश में घूमते हुए धीरे से भूमि तक पहुँचते रहते हैं ।


Two minute atoms make an atom. The three atoms make a Trasarenu (combination of three pairs of atoms.)We could see the Trasarenu in the beam of sunlight entering from the window they settle down on the earth then.

Friday, November 17, 2017

शास्त्रकोषः

द्वाविमौ पुरुषौ लोके सूर्यमण्डलभेदकौ ।
परिव्राड् योगयुक्तश्च रणे चाभिमुखे हतः ॥(पराशरस्मृतिः तृ. 37)

ಯೋಗಿಯಾಗಿರುವ ಸಂನ್ಯಾಸಿ ಹಾಗೂ ಯುದ್ಧದಲ್ಲಿ ಶತ್ರುಗಳಿಗೆ ಇದಿರಾಗಿ ದಿಟ್ಟತನದಿಂದ ಹೋರಾಡಿ ಮಡಿದ ವೀರ ಇವರೀರ್ವರು ಮಾತ್ರ ಲೋಕದಲ್ಲಿ ಸೂರ್ಯಮಂಡಲವನ್ನು ಭೇದಿಸಿ ಮುನ್ನಡೆದು ಉನ್ನತಸ್ಥಾನವನ್ನು ಪಡೆಯಬಲ್ಲರು.

कोई संन्यासी योगी, तथा युद्धभूमि में शत्रु के सामने वीरावेश से खडा हुआ वीर यह दो लोग ही सूर्यमण्डल को भेदकर आगे जाकर उच्चस्थान प्राप्त कर सकते हैं ।


A Yogi Saint or a soldier standing in front of the enemy in rage are the only two personalities who could cross the solar system and obtain the highest place.  

Thursday, November 16, 2017

शास्त्रकोषः

वेदः स्मृतिः सदाचारः स्वस्य च प्रियमात्मनः ।
एतच्चतुर्विधः प्राहुः साक्षाद्धर्मस्य लक्षणम् ॥(मनुस्मृतिः 2.12)

ವೇದಗಳು, ಪ್ರಾಚೀನಮಹರ್ಷಿಗಳಿಂದ ರಚಿತವಾದ ಸ್ಮೃತಿಗಳು, ಸಾಧುಜನರ ಆಚಾರ ಹಾಗೂ ಅಂತರಂಗದ ಸಂತುಷ್ಟಿ ಇವು ನಮಗೆ ಧರ್ಮವನ್ನು ತಿಳಿಸಿಕೊಡುವ ನಾಲ್ಕು ಸಾಧನಗಳಾಗಿವೆ.

वेद, प्राचीन ऋषियों द्वारा रचा हुई स्मृतियाँ, साधुजनों का आचरण तथा आन्तरिक समाधान यह चार धर्मज्ञान के लिये साधनभूत हैं ।

The four Vedas, the Smruti texts written by sages, behavior of saints and internal satisfaction are the four means of obtaining the knowledge of Dharma.

Wednesday, November 15, 2017

शास्त्रकोषः

त्रयो रोगाः इति निजागन्तुमानसाः । तत्र निजः शारीरदोषसमुत्थः , आगन्तुर्भूतविषवाय्वग्निसम्प्रहारादिसमुत्थः, मानसः पुनरिष्टस्य लाभात् लाभाच्चानिष्टस्योपजायते ।(चरकसंहिता सूत्रस्थानं 11.45)

ಮಾನವರಿಗೆ ಉಂಟಾಗುವ ರೋಗಗಳು 3 ವಿಧವಾಗಿವೆ, ನಿಜ – ಆಗಂತು ಹಾಗೂ ಮಾನಸ. ಶರೀರದಲ್ಲಿ ವಾತಪಿತ್ತಕಫಗಳ ವೈಷಮ್ಯದಿಂದುಂಟಾಗುವ ರೋಗಗಳು ನಿಜರೋಗಗಳು. ಪಿಶಾಚ, ವಿಷ, ವಾಯು, ಅಗ್ನಿ ಮೊದಲಾದ ಕಾರಣದಿಂದುಂಟಾಗುವ ರೋಗ ಆಗಂತು. ಅಭೀಷ್ಟವಸ್ತು/ವ್ಯಕ್ತಿಯ ಪ್ರಾಪ್ತಿಯಿಂದ, ಅನಿಷ್ಟವಸ್ತುವಿನ/ವ್ಯಕ್ತಿಯ ಪ್ರಾಪ್ತಿ/ಸಂಸರ್ಗದಿಂದ ಉಂಟಾಗುವುದು ಮಾನಸರೋಗ. 

मानव को तीन प्रकार के रोग संभव होते हैं – निज, आगन्तुक और मानसिक । शरीर में वात पित्त और कफ यह तीन गुण विषम होनेपर निजरोग उत्पन्न होते हैं । पिशाच, वायु, अग्नि, विष इत्यादि कारणों से आगन्तुक रोग होते हैं । इच्छित वस्तु/व्यक्ति की प्राप्ति से और अनिष्टवस्तु/व्यक्ति के प्राप्ति से मानसिकरोग होते हैं ।


The illness which may happen to man has 3 types called Nija, Agantu and Manasik. Illness which is created by the variations of Vata, Pitta, Kapha in the human body is called as Nija. Illness which is created by demons, poison, air, fire is called as Agantu. And the illness caused by connection with dear ones/things and nasty people/things is called as Manasik. 

Tuesday, November 14, 2017

शास्त्रकोषः

स्वरूपकथनं यत्तु कस्यचिद् तत्र दृश्यते ।
तदङ्गत्वेन तस्यापि शास्त्रत्वमवगम्यते ॥( श्लोकवार्तिकम् शब्दपरिच्छेदः 5)

ಮಾನವರಿಗೆ ಹಿತಸಾಧನಗಳ ಹಾಗೂ ಅಹಿತಸಾಧನಗಳ ಬಗ್ಗೆ ಖಚಿತವಾದ ತಿಳುವಳಿಕೆಯನ್ನು ಒದಗಿಸಿಕೊಡುವುದಕ್ಕಾಗಿ ಅವುಗಳ ಸ್ವರೂಪವನ್ನು ವಿಸ್ತಾರವಾಗಿ ವಿಶ್ಲೇಷಿಸುತ್ತಿರುವ ವಾಙ್ಮಯವೂ ಶಾಸ್ತ್ರವೆನಿಸುತ್ತದೆ.

The literature which exactly describes the path of well being and the path of non well being and also describes its nature broadly can be called as a Shastra.


Monday, November 13, 2017

शास्त्रकोषः

प्रवृत्तिर्वा निवृत्तिर्वा नित्येन कृतकेन वा ।
पुंसां येनोपदिश्येत तच्छास्त्रमभिधीयते ॥(श्लोकवार्तिकम् शब्दपरिच्छेदः 4)

ಯಾವ ವಾಙ್ಮಯವು ಮಾನವರಿಗೆ ಶ್ರೇಯೋಮಾರ್ಗವನ್ನು ತೋರಿಸಿಕೊಟ್ಟು ಅದರಲ್ಲಿ ಮುನ್ನಡೆಯುವಂತೆ ಉಪದೇಶಿಸುವುದೋ, ಅನಿಷ್ಟದ ಹಾದಿಯಿಂದ ಹಿಂದೆ ಸರಿಯುವಂತೆ ಆದೇಶಿಸುವುದೋ ಆ ವಾಙ್ಮಯವು ಅನಾದಿಕಾಲದಿಂದ ಬಂದಿದ್ದರೂ ವಿವೇಕಿಗಳಿಂದ ರಚಿಸಲ್ಪಟ್ಟಿದ್ದೇ ಆದರೂ ಶಾಸ್ತ್ರವೆನಿಸುತ್ತದೆ.

जो वाङमय मनुष्य को उत्तम मार्ग दिखाकर उसपर चलले का उपदेश देता है और अनिष्ट कार्यों से पीछे हटने का आदेश देता है वह वाङमय अनादिकाल से आते हुए भी, विवेकीजनों द्वारा रचा हुए होते हुए भी शास्त्र कहलाता है ।


The literature which shows the path of wellbeing and preaches us to follow, which shows the path of non wellbeing and tells us to stepback, can be called as a Shastra even if it is from old age or created by the people who has wisdom.

Sunday, November 12, 2017

शास्त्रकोषः

त्यागः प्रज्ञापराधानम् इन्द्रियोपशमः स्मृतिः ।
देशकालात्यविज्ञानं  सद्वृत्तस्यानुवर्तनम् ।
आगन्तूनाम् अनुत्पत्तौ एष मार्गो निदर्शितः ॥( चरकसंहिता सूत्रस्थानम् 53-54)

ಇಂದ್ರಿಯಗಳ ವಿಷಯಲಂಪಟತನವನ್ನು ನಿಗ್ರಹಿಸುವುದರಿಂದ ಹಾಗೂ ಪುತ್ರಮಿತ್ರಾದಿ ಸಂಬಂಧಗಳ ನಶ್ವರತೆಯನ್ನು ಆಗಾಗ ಅನುಸಂಧಾನಗೈಯುವುದರಿಂದ ಅಸೂಯೆ, ಶೋಕ ಮೊದಲಾದ ಮನೋರೋಗಗಳನ್ನು ಶಮನಗೊಳಿಸಬೇಕು. ಭೂತ - ವಿಷ – ವಾಯು ಮೊದಲಾದವುಗಳಿಂದ ಸಂಭವಿಸಬಹುದಾದ ಆಗಂತುರೋಗಗಳನ್ನು ದೇಶ – ಕಾಲ ಹಾಗೂ ಆತ್ಮಸಾಮರ್ಥ್ಯದ ಪರಿಜ್ಞಾನದಿಂದ ಪರಿಹರಿಸಬೇಕು.

इन्द्रियों की विषयवासना का निग्रहकरने से और पुत्रमित्र इत्यादि संबंधों की नश्वरता का अनुसंधान करने से असूया शोक इत्यादि मनोरोगों का शमन होता है । भूत, विष, वायु इत्यादियों से होनेवाले आगन्तुक रोगों को देशकाल और आत्मज्ञान का सामर्थ्य जानकर मिटा सकते हैं ।


By controlling the sense organs from worldly desires and thinking about the impermanency of our relationship with the dear ones we should soothe the illness of mind. The illness which comes from ghosts, poison and air should be solved by the knowledge of self.

Saturday, November 11, 2017

शास्त्रकोषः

ईर्ष्याशोकभयक्रोधमानद्वेषादयश्च ये ।
मनोविकारास्तेप्युक्ताः सर्वे प्रज्ञापराधजाः ॥( चरकसंहिता सूत्रस्थानम् 52)

ಅಸೂಯೆ, ಶೋಕ, ಭಯ, ಕ್ರೋಧ, ಅಹಂಕಾರ, ದ್ವೇಷ ಇವೆಲ್ಲವೂ ಪ್ರಜ್ಞಾಪರಾಧದಿಂದ ಉದ್ಭವಿಸುವ ಮನೋರೋಗಗಳಾಗಿವೆ.

असूया, शोक, भय, क्रोध, अहंकार, द्वेष, यह सारे प्रज्ञापराध से उत्पन्न होनेवाले मनोरोग हैं ।

Jealousy, mourning, fear, anger, ego, hatred these are the illnesses of mind caused by Prajnaparadha.

Friday, November 10, 2017

शास्त्रकोषः

ये भूतविषवाय्वग्निसंप्रहारादिसम्भवाः ।
नृणामागन्तवो रोगाः प्रज्ञा तेष्वपराध्यति ॥ (चरकसंहिता सूत्रस्थानम् 7.51)

ಮಾನವನಿಗೆ ಉಂಟಾಗುವ ರೋಗಗಳಲ್ಲಿ ಆಗಂತುರೋಗಕ್ಕೆ ಪ್ರಜ್ಞಾಪರಾಧವು ಕಾರಣವಾಗಿರುತ್ತದೆ. ಪಿಶಾಚಾದಿಗಳಿಂದ, ವಿಷವಾಯು - ಅಗ್ನಿ ಇವುಗಳಿಂದ ಉಂಟಾಗುವ ರೋಗವು ಆಗಂತು ರೋಗವು. ಅಜ್ಞಾನ ಹಾಗೂ ತಪ್ಪು ತಿಳುವಳಿಕೆಯೆ ಪ್ರಜ್ಞಾಪರಾಧ.

मानव को होनेवाला रोगों में आगन्तु रोग का कारण बुद्धि से किए जानेवाले अपराध हैं । पिशाच आदि से, विष, वायु, और अग्नि इनसे होनेवाला रोग आगन्तुक रोग है । अज्ञान और अयथार्थज्ञान ही बुद्धि से किए जानेवाले अपराध हैं ।


An illness called Agantu is caused by Prajnaparadha. And the Agantu is basically created by demons, poison, air and fire. Ignorance and misconception is Prajnaparadha.

Thursday, November 9, 2017

शास्त्रकोषः

परुषस्य अतिमात्रस्य सूचकस्यानृतस्य च ।
वाक्यस्याकालयुक्तस्य धारयेद् वेगमुत्थितम् ॥( चरकसंहिता – सूत्रस्थानं 7.28)

ಮಾನವನು ತಡೆಹಿಡಿಯಬೇಕಾದ ವಾಚಿಕವೇಗವು 5 ಪ್ರಕಾರವಾಗಿದೆ. ಇತರರಿಗೆ ನೋವನ್ನುಂಟುಮಾಡುವ ಮಾತು, ಅತಿಯಾದ ಮಾತು, ಇತರರಿಗೆ ಆಗಿರುವ ಅನಿಷ್ಟವನ್ನು ತಿಳಿಸುವ ಮಾತು, ಸುಳ್ಳುನುಡಿ, ಸಾಂದರ್ಭಿಕವಲ್ಲದ ಮಾತು.

मनुष्य ने पाँच मौखिक गतिविधियों पर ध्यान देना चाहिये । वह हैं- दूसरों को दुख पहुँचानेवाले शब्द, अतिरिक्त या अधिक शब्द, लोगों को हुये कष्ट को व्यक्त करनेवाले शब्द, असत्यकथन और सन्दर्भरहित शब्द ।
Man should control five oral forces. Words which cause pain to others, words which are redundant, words which express the nasty happened to others, lies, words which are not contextual. 

Wednesday, November 8, 2017

शास्त्रकोषः

लोभशोकभयक्रोधमानवेगान् विधारयेत् ।
नैर्लज्ज्येर्ष्यातिरागाणमभिध्यायाश्च बुद्धिमान् ॥( चरकसंहिता – सूत्रस्थानं 7.27)

ಮಾನವನು ತಡೆಹಿಡಿಯಬೇಕಾದ ವೇಗಗಳು ಮೂರುವಿಧವಾಗಿದೆ. ಅವುಗಳಲ್ಲಿ ಮೊದಲನೆಯದು ಮಾನಸಕ್ರಿಯೆಯಿಂದ ಉಂಟಾಗುವ ವೇಗ. ಇದು 9 ವಿಧವಾಗಿದೆ. ಲೋಭದಿಂದ ಅನುಚಿತಯಾಚನೆ, ಬಂಧುಮರಣಾದಿದುಃಖದಿಂದುಂಟಾಗುವ ದೈನ್ಯ, ತನಗಾಗಬಹುದಾದ ಅಪಕಾರದ ಚಿಂತನೆಯಿಂದ ಉಂಟಾಗುವ ದೈನ್ಯ, ಕ್ರೋಧ, ಅಹಂಕಾರ, ನಿರ್ಲಜ್ಜೆ, ಈರ್ಷ್ಯ, ಅತಿಆಶೆ, ಇತರರಬಗ್ಗೆ ದ್ರೋಹಚಿಂತನೆ.




Man should control three forces. In which the first one is the force which is caused by mind which has nine types. Improper begging caused by lust, grieve caused by the death of dear ones, humbleness caused by thinking the disgrace which may happen to us, anger, ego, shamelessness, enviousness, greed, thinking about betrayal. 

Tuesday, November 7, 2017

शास्त्रकोषः

स वेगान् धारयेद्धीमान् जातान् मूत्रपुरीषयोः ।
न रेतसो न वातस्य न छर्द्याः क्षवथोर्न च  ॥
नोद्गारस्य न जृम्भायाः न वेगान् क्षुत्पिपासयोः ।
न बाष्पस्य न निद्रायाः निःश्वासस्य श्रमेण च ॥ (चरकसंहिता – सूत्रस्थानं 7.3-4)

ಶರೀರದಲ್ಲಿ ಉದ್ಭವಿಸುವ ಹಲವು ವೇಗಗಳಲ್ಲಿ ಕೆಲವನ್ನು ತಡೆಹಿಡಿಯಕೂಡದು. ತಡೆಹಿಡಿಯುವುದರಿಂದ ರೋಗವುಂಟಾಗುವುದು. ತಡೆಹಿಡಿಯಲ್ಪಡಬಾರದ 13 ವೇಗಗಳಿವು – ಹಸಿವು, ಬಾಯಾರಿಕೆ, ನಿದ್ದೆ, ಕಣ್ಣೀರು, ತೇಗುವಿಕೆ, ಆಕಳಿಕೆ, ಶ್ರಮದಿಂದುಂಟಾದ ನಿಶ್ವಾಸ, ಸೀನು(ಕೆಮ್ಮಲು), ವಾಂತಿ, ಪ್ರಾಣಾಪಾನಾದಿ ವಾಯು, ರೇತಸ್ಸು, ಮೂತ್ರ ಹಾಗೂ ಮಲ. 


We should not hold down some of forces arise in the body. It creates an illness when we hold them down. Those 13 forces are – hunger, thirst, sleep, tears, eruct, yawn, breathe out caused by hard work, sneeze, vomiting, Vayu like Prana and Apaana, sperm, urine and excrement.   

Monday, November 6, 2017

शास्त्रकोषः

अन्नादे भ्रूणहा मार्ष्टि पत्यौ भार्यापचारिणी ।
गुरौ शिष्यश्च यज्यश्च स्तेनो राजनि किल्बिषम् ॥(मनुस्मृतिः ८.३१७)

ಭ್ರೂಣಹತ್ಯಗೈದವನ ಪಾಪವು ಆತನ ಅನ್ನವನ್ನು ಉಣ್ಣುವವನಿಗೂ ಸಂಕ್ರಮಿಸುವುದು. ದುರಾಚಾರಿಣಿಯು ಗಳಿಸಿದ ಪಾಪವು ಆಕೆಯ ಪತಿಗೂ ಲಭಿಸುವುದು. ಕರ್ತವ್ಯಭ್ರಷ್ಟನಾಗಿ ಶಿಷ್ಯನು ಸಂಪಾದಿಸಿದ ಪಾಪವು ಆತನ ಗುರುವಿಗೂ ಲಭಿಸುವುದು. ಋತ್ವಿಜನು ವಿಧಿಯನ್ನು ಅತಿಕ್ರಮಿಸಿ ಸಂಪಾದಿಸಿದ ಪಾಪವು ಯಜಮಾನನಿಗೂ ದೊರೆಯುವುದು. ಕಳ್ಳತನಗೈದವನ ಪಾಪವು ರಾಜ್ಯವನ್ನಾಳುವ ರಾಜನಿಗೂ ಸಂಕ್ರಮಿಸುವುದು.

जो भ्रूणहत्या करें उसके सेवक को भी पापांश प्राप्त होता है । पत्नी के दुराचारों का पापांश पति को, कर्तव्यभ्रष्ट शिष्य का पापांश उसके गुरु को, ऋत्विज के भूलों का पापांश यजमान को तथा चोर के दुष्कर्मों का पापांश राजा को प्राप्त होता है ।


The servant of a person who performs infanticide shares the part of his sin. In the same way, a husband shares the sin of his disloyal wife, so does a Guru of his undutiful disciple, a Yajamana of his Rutvija and a king of a thief.